ಬಂಧಿತ ಗರ್ಜನೆ

“ಅಮ್ಮ! ಹುಲಿ!” ಎಂದು ಆಕೆ ಕಿರುಚಿದಳು,
ಪಿಂಜರದ ಸುತ್ತ ನನ್ನನ್ನು ಹುಡುಕಿದಳು.

ನಾನು ಗರ್ಜಿಸಿದೆ, ದವಡೆ ತೋರಿಸಿದೆ,
ಆಕೆ ಇನ್ನೂ ಜೋರಾಗಿ ಚಪ್ಪಾಳೆ ತಟ್ಟಿದಳು.

ಏಕೆ ನಾನು ಇವರನ್ನು ಓಡಿಸಲಾರೆನು?
ಇದೇ ನನಗೆ ಅತಿ ಕಿರಿಕಿರಿ ತರುತ್ತದೆ.

ಒಂದಾನೊಂದು ಕಾಲದಲ್ಲಿ ನನ್ನ ಗರ್ಜನೆಗೆ ಕಾಡೇ ನಡುಗುತ್ತಿತ್ತು,
ಕ್ಷಣದಲ್ಲೇ ಎಲ್ಲೆಡೆ ಭಯ ಆವರಿಸಿತ್ತು.

ಮೊಲಗಳು ಓಡುತ್ತಿದ್ದವು,
ಕಪ್ಪೆಗಳು ಜಿಗಿಯುತ್ತಿದ್ದವು,
ಪಕ್ಷಿಗಳು ಬೆಚ್ಚಿ ಹಾರುತ್ತಿದ್ದವು,
ಇಲಿ ಬಿಲದಲ್ಲಿ ಅಡಗುತ್ತಿದ್ದವು.

ಮಾರ್ಗ ಖಾಲಿಯಾಗುತ್ತಿತ್ತು,
ಪ್ರಾಣಿಗಳು ಭಯದಿಂದ ನಡಗುತ್ತಿದ್ದವು .

ನನ್ನ ಪ್ರತಿಯೊಂದು ಹೆಜ್ಜೆಗೆ ಭೂಮಿ ನಡುಗುತ್ತಿತ್ತು,
ಅಯ್ಯೋ, ಆ ದಿನಗಳು ಮತ್ತೆ ಬರಲಿ ಎಂದು ಮನಸ್ಸು ಹಾತೊರೆಯುತ್ತದೆ.

ದಟ್ಟ ಗಿಡಗಂಟಿಗಳಲ್ಲಿ ನಾನು ಅಡಗಿ ಕುಳಿತಿದ್ದೆ,
ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದ್ದೆ.

ನನ್ನ ಗರ್ಜನೆ ಆಕಾಶ ಮುಟ್ಟುತ್ತಿತ್ತು,
ಮತ್ತು ಕಾಡು ಎಲ್ಲೆಡೆ ನಡುಗುತ್ತಿತ್ತು.

ಆದರೆ ಈಗ, ನನಗೆ ಏನೂ ಅರ್ಥವಾಗುವುದಿಲ್ಲ,
ಈ ಎರಡು ಕಾಲಿನ ಜೀವಿಗಳು ಏನು ಮಾಡಿವೆ?

ನನ್ನ ದೊಡ್ಡ ಲೋಕವನ್ನು ಇಷ್ಟು ಚಿಕ್ಕದಾಗಿಸಿದರು ಹೇಗೆ?
ಮತ್ತು ನಾನು ಇಲ್ಲಿ ಹೇಗೆ ಬಂದೆ—
ಒಮ್ಮೆ ಎತ್ತರವಾಗಿ ನಿಂತ ಗರ್ವದ ಹುಲಿ ಆಗಿದ್ದ ನಾನು?


ಈ ಕವಿತೆ ಮೂಲತಃ ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಕವಿತೆಯ ಕನ್ನಡ ಅನುವಾದವಾಗಿದೆ. ಮೂಲ ಕವಿತೆಯ ಭಾವನೆ, ಅರ್ಥ ಮತ್ತು ಸೌಂದರ್ಯವನ್ನು ಉಳಿಸಿಕೊಂಡು ಕನ್ನಡ ಓದುಗರಿಗಾಗಿ ಪ್ರೀತಿಯಿಂದ ಅನುವಾದಿಸಲಾಗಿದೆ.


Discover more from

Subscribe to get the latest posts sent to your email.

Leave a Reply

Your email address will not be published. Required fields are marked *